English
Menu
PARTICIPANTS
REGISTERED

101328

ಭಾಗವಹಿಸಲು ಇಚ್ಛಿಸುವವರು ನಿಮ್ಮ ಹೆಸರು ನೋಂದಾಯಿಸಿ ಮತ್ತು ನಿಮ್ಮ ವೆಲ್‌ಕಮ್‌ ಕಿಟ್ ಅನ್ನು ಪಡೆಯಿರಿ.

ನಮ್ಮ ಬಗ್ಗೆ


ಸ್ವತಂತ್ರ ಭಾರತದ 75ನೇ ವರ್ಷದ ಹುಟ್ಟುಹಬ್ಬವನ್ನು ನಾವು ಈ ವರ್ಷ ಆಚರಿಸಲಿದ್ದೇವೆ. ಈ ಸುಸಂದರ್ಭದಲ್ಲಿ ಆಗಸ್ಟ್‌ 15 ರಂದು ಬೆಂಗಳೂರಿನಲ್ಲಿ #FreedomMarch ನಡೆಯಲಿದ್ದು ಇದರಲ್ಲಿ 75,000ಕ್ಕೂ ಹೆಚ್ಚು ಮಂದಿ ದೇಶಕ್ಕಾಗಿ ಹೆಜ್ಜೆ ಹಾಕಲಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಯಾತ್ರೆಯಾಗಲಿದೆ. ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹಾಗೂ ಸುಭದ್ರ ಭವಿಷ್ಯದ ಬುನಾದಿ ಹಾಕಿದ ಸ್ವಾತಂತ್ರ್ಯ ವೀರರನ್ನು ಗೌರವಿಸಲು ಇದೊಂದು ಪ್ರಮುಖ ವೇದಿಕೆಯಾಗಿದೆ.

ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರಲ್ಲೂ ನಮ್ಮದೊಂದು ಮನವಿ. ಐತಿಹಾಸಿಕ ನಡಿಗೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಸ್ವಾತಂತ್ರ್ಯ ನಡಿಗೆಯ ಭಾಗವಾಗಿ. #FreedomMarch ನಲ್ಲಿ ಭಾಗವಹಿಸಲು ಕೆಳಗೆ ನೀಡಿರುವ ಫಾರ್ಮ್‌ನಲ್ಲಿ ನಿಮ್ಮ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ. ಫ್ರೀಡಂ ಮಾರ್ಚ್‌ನಲ್ಲಿ ಭಾಗವಹಿಸುವವರ ಮನೆ ಬಾಗಿಲಿಗೆ ಅತ್ಯಾಕರ್ಷಕ ವೆಲ್‌ಕಂ ಕಿಟ್‌ ಬರಲಿದೆ.

ನೋಂದಣಿ ಅರ್ಜಿ

How to Participate

ಹಂತ 1:

ದಯವಿಟ್ಟು * ಚಿಹ್ನೆಯನ್ನು ಗುರುತಿಸಲಾದ ಎಲ್ಲಾ ಜಾಗದಲ್ಲಿ ಕಡ್ಡಾಯವಾಗಿ ವಿವರಗಳನ್ನು ಭರ್ತಿ ಮಾಡಿ.

ಹಂತ 2:

ನಿಮಗೆ ಅಗತ್ಯವಿರುವ ಸ್ವಾಗತ ಕಿಟ್ ವಸ್ತುಗಳನ್ನು ಆಯ್ಕೆಮಾಡಿ.

ಹಂತ 3:

ಟಿ-ಶರ್ಟ್ ಸೈಜ್‌ ಮೇಲೆ ಕ್ಲಿಕ್ ಮಾಡಿ ಮತ್ತು ಸೂಕ್ತವಾದ ಆಯ್ಕೆಯನ್ನು ಆರಿಸಿ.

ಹಂತ 4:

'ಸಬ್‌ಮಿಟ್‌ʼ ಬಟನ್ ಒತ್ತಿರಿ.

ಹಂತ 5:

ನಿಮ್ಮ ಫಾರ್ಮ್ ಅನ್ನು ಸಲ್ಲಿಸಿದ ನಂತರ, ನೀವು ಒದಗಿಸಿದ ಫೋನ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ.

ಹಂತ 6:

ಪಾಪ್-ಅಪ್ ವಿಂಡೋದಲ್ಲಿ OTP ಅನ್ನು ಅಪ್‌ಡೇಟ್‌ ಮಾಡಿ, ಪರಿಶೀಲಿಸಿ ಮತ್ತು ಸಬ್‌ಮಿಟ್‌ ಬಟನ್‌ ಕ್ಲಿಕ್ ಮಾಡಿ.

ಹಂತ 7:

"ಅಭಿನಂದನೆಗಳು" ಎಂಬ ಪಾಪ್ ಅಪ್ ಸಂದೇಶವು ಪರದೆಯ ಮೇಲೆ ಗೋಚರಿಸುತ್ತದೆ, ಇದು ನೀವು ಫ್ರೀಡಂ ಮಾರ್ಚ್‌ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸುತ್ತದೆ

ಹಂತ 8:

ನಿಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ (ಫೇಸ್‌ಬುಕ್, ಟ್ವಿಟರ್ ಮತ್ತು ಲಿಂಕ್ಡ್ಇನ್) ಭಾಗವಹಿಸುವಿಕೆಯ ಫಾರ್ಮ್ ಅನ್ನು ಸ್ಟೇಟಸ್‌/ಸ್ಟೋರಿ/ಫ್ಲೀಟ್ ಆಗಿ ಹಂಚಿಕೊಳ್ಳಿ

ಸಂಭಾವ್ಯ ಪ್ರಶ್ನೆ ಮತ್ತು ಉತ್ತರಗಳು.

ಸ್ವಾತಂತ್ರ್ಯ ನಡಿಗೆಯು ಆಗಸ್ಟ್ 15, 2022ರಂದು ಪ್ರಾರಂಭವಾಗಲಿದೆ.

ಸ್ವಾತಂತ್ರ್ಯ ನಡಿಗೆಯು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗುವ ನಡಿಗೆಯು ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಕೊನೆಗೊಳ್ಳಲಿದೆ.

ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡಿಗೆಯಲ್ಲಿ ಭಾಗವಹಿಸಬಹುದು. ಆದರೆ ಆರಂಭದಿಂದಲೇ ಭಾಗವಹಿಸುವಂತೆ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಸ್ವಾತಂತ್ರ್ಯ ನಡಿಗೆಯು ಅದೇ ದಿನ ಅಂದರೆ ಆಗಸ್ಟ್ 15ರಂದು ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಕೊನೆಗೊಳ್ಳಲಿದೆ.

ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಸ್ವಾತಂತ್ರ್ಯ ನಡಿಗೆಯನ್ನು ಆಯೋಜಿಸಲಾಗಿದೆ. ತಾಯ್ನಾಡಿಗಾಗಿ ತ್ಯಾಗ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸಿ ನೆನೆಯುವುದು ಈ ಕಾರ್ಯಕ್ರಮದ ಉದ್ದೇಶ. ನಡಿಗೆಯ ಮೂಲಕ ಭಾರತ ಹಾಗೂ ಕರ್ನಾಟಕದ ಹೀರೋಗಳಿಗೆ ಗೌರವ ಸೂಚಿಸುವ ಪ್ರಯತ್ನ ನಮ್ಮದು.

ಭಾರತ ಹಾಗೂ ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದು ನಮ್ಮ ಜನರಲ್ಲಿ ಸ್ಪೂರ್ತಿಯನ್ನು ತುಂಬುವ ಕಾರ್ಯವಾಗಿದೆ. ಆದ್ದರಿಂದ ನಮ್ಮ ರಾಜ್ಯದ ಪ್ರತಿಯೊಬ್ಬರನ್ನೂ ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ.

ಖಂಡಿತ, ನಿಮ್ಮ ಕುಟುಂಬದ ಸದಸ್ಯರನ್ನು ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಲು ಕರೆತರಬಹುದು.

ಖಂಡಿತ, ನಡಿಗೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಆದರದ ಸ್ವಾಗತ. ಯುವಸಮೂಹದ ಭಾಗವಹಿಸುವಿಕೆಯನ್ನು ನಾವು ಪ್ರೋತ್ಸಾಹಿಸುತ್ತೇವೆ.

ಹೌದು, ನಡಿಗೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನಿಮಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

75ನೇ ಸ್ವಾತಂತ್ರ್ಯ ದಿನಕ್ಕೆ ರಾಷ್ಷ್ರಧ್ವಜದ ಬಣ್ಣಗಳ ಮೂಲಕ ಮೆರುಗು ತುಂಬಲು ಕಿಟ್‍ನಲ್ಲಿ ನೀಡಲಾದ ಟಿ-ಶರ್ಟ್, ಬ್ಯಾಡ್ಜ್ ಹಾಗೂ ಟೋಪಿಯನ್ನು ಧರಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ನಡಿಗೆಯಲ್ಲಿ ಭಾಗವಹಿಸಲು ನೀವು ನೋಂದಾಯಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ನೋಂದಾಯಿಸಿಕೊಳ್ಳುವ ಮೂಲಕ ನೀವು ವೆಲ್‍ಕಂ ಕಿಟ್ ಪಡೆಯಲು ಅರ್ಹರಾಗುವಿರಿ ಹಾಗೂ ನಾವು ನಿಮಗೆ ಅದನ್ನು ನೀಡಲಿದ್ದೇವೆ. ಕಾರ್ಯಕ್ರಮವು ಸುಗಮವಾಗಿ ಜರುಗಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ನಿಮ್ಮ ನೋಂದಣಿಯು ನಮಗೆ ಸಹಾಯ ಮಾಡಲಿದೆ.

ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಂಡ ಮೇಲೆ ನೀವು ನಿಮ್ಮ ವೆಲ್‍ಕಂ ಕಿಟ್ ಪಡೆಯುವಿರಿ, ಇದರಲ್ಲಿ ಟಿ-ಶರ್ಟ್, ಬ್ಯಾಡ್ಜ್ ಹಾಗೂ ಟೋಪಿ ಇರಲಿದೆ.

ಖಂಡಿತ, ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ. ಆದರೂ, ಆಗಸ್ಟ್ 15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಹಾಗೂ ವೆಲ್‍ಕಂ ಕಿಟ್ ನೀಡಲು ನೋಂದಣಿ ಮಾಡಿಸಿಕೊಳ್ಳುವಂತೆ ನಿಮಗೆ ತಿಳಿಸುತ್ತೇವೆ.

ಕನ್ನಡದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅವರ ಹೋರಾಟದ ಕುರಿತು 2 ನಿಮಿಷದ ವಿಡಿಯೋವನ್ನು ನಿಮ್ಮ ಪ್ರತಿಭೆಯನ್ನು ಉಪಯೋಗಿಸಿ ತಯಾರಿಸಬೇಕು, ಇದು ಮುಕ್ತ ವಿಡಿಯೋ ಸ್ಪರ್ಧೆಯಾಗಿದೆ. ನಿಮ್ಮ ಕ್ರಿಯಾಶೀಲತೆಯನ್ನು ಈ ಮೂಲಕ ತೋರ್ಪಡಿಸಬಹುದು. ಹಾಡು, ನೃತ್ಯ, ಕವನ, ಭಾಷಣ ಹೀಗೆ ಯಾವುದೇ ರೀತಿಯಲ್ಲಿ ನಿಮ್ಮ ವಿಡಿಯೋ ಮಾಡಿ ಸಂದೇಶವನ್ನು ತಲುಪಿಸಿ. ಫೇಸ್‍ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಮೊದಲಾದ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ #FreedomMarch ಜೊತೆಗೆ ಹಂಚಿಕೊಳ್ಳಿ. ನಿಮ್ಮ ಪ್ರೊಫೈಲ್ ಪಬ್ಲಿಕ್ ಆಗಿರುವಂತೆ ನೋಡಿಕೊಳ್ಳಿ. ಆನ್‍ಲೈನ್‍ನಲ್ಲಿ ಹಂಚಿಕೊಂಡ ನಂತರ ಆ ಲಿಂಕ್ ಅನ್ನು ನಮ್ಮ ವೆಬ್‍ಸೈಟ್ www.freedommarch.in ನಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯೊಂದಿಗೆ ಸಬ್‍ಮಿಟ್ ಮಾಡಿ. ಸ್ಪರ್ಧೆಯಲ್ಲಿ ಮುಂದುವರೆಯಲು ತಪ್ಪದೇ ಈ ಎಲ್ಲ ಸೂಚನೆಗಳನ್ನು ಪಾಲಿಸಿ.
Scroll to top